A note from the Jnana Chethana Education Trust, in association with Hindu PU College, Shirva.
In association with Hindu Pre-University College, the Jnana Chethana Education Trust has begun its work.
The contribution of Shirva Hindu Pre-University College to the field of education is without parallel. The credit for shaping the complete personality of thousands of students belongs to this institution.
From this academic year, in association with the college, the Jnana Chethana Education Trust has been established as the academic management body. Its purpose is to give students at the Pre-University stage the complete development of their personality, to instil in them a modern and competitive spirit of knowledge, and to provide an education founded on values.
ಹಿಂದೂ ಪದವಿಪೂರ್ವ ಕಾಲೇಜು, ಶಿರ್ವ ಇವರ ಸಹಯೋಗದೊಂದಿಗೆ
ವಿದ್ಯಾರ್ಥಿಗಳ ಪರಿಪೂರ್ಣ ವ್ಯಕ್ತಿತ್ವ ಬೆಳವಣಿಗೆಗೆ "ಜ್ಞಾನ ಚೇತನ ಎಜುಕೇಶನ್ ಟ್ರಸ್ಟ್" ಆಶಾಕಿರಣ
ಹಿಂದೂ ಪದವಿಪೂರ್ವ ಕಾಲೇಜಿನ ಸಹಯೋಗದೊಂದಿಗೆ "ಜ್ಞಾನ ಚೇತನ ಎಜುಕೇಶನ್ ಟ್ರಸ್ಟ್" ಕಾರ್ಯಾರಂಭ.
ಶೈಕ್ಷಣಿಕ ಕ್ಷೇತ್ರದಲ್ಲಿ ಶಿರ್ವ ಹಿಂದೂ ಪದವಿಪೂರ್ವ ಕಾಲೇಜು ಇದರ ಕೊಡುಗೆ ಅನನ್ಯವಾದುದು, ಸಾವಿರಾರು ವಿದ್ಯಾರ್ಥಿಗಳ ಬದುಕಿಗೆ ಪರಿಪೂರ್ಣ ವ್ಯಕ್ತಿತ್ವವನ್ನು ರೂಪಿಸಿ ಕೊಟ್ಟ ಕೀರ್ತಿ ಈ ಶೈಕ್ಷಣಿಕ ಸಂಸ್ಥೆಗೆ ಸಲ್ಲುತ್ತದೆ. ಈ ಶೈಕ್ಷಣಿಕ ವರ್ಷದಲ್ಲಿ ಈ ಸಂಸ್ಥೆಯ ಸಹಯೋಗದೊಂದಿಗೆ ಪದವಿಪೂರ್ವ ಶಿಕ್ಷಣದ ಹಂತದಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವದ ಪರಿಪೂರ್ಣ ಬೆಳವಣಿಗೆ ಮತ್ತು ಆಧುನಿಕತೆ ಹಾಗೂ ಸ್ಪರ್ಧಾತ್ಮಕ ಜ್ಞಾನಚೇತನ ಶಕ್ತಿಯನ್ನು ವಿದ್ಯಾರ್ಥಿಗಳಲ್ಲಿ ಮೈಗೂಡಿಸುವ ಜೊತೆಗೆ ಮೌಲ್ಯಾಧಾರಿತ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸ್ಥಾಪನೆಗೊಂಡ ನವ ಶೈಕ್ಷಣಿಕ ಆಡಳಿತ ಮಂಡಳಿ "ಜ್ಞಾನ ಚೇತನ ಎಜುಕೇಶನ್ ಟ್ರಸ್ಟ್".
"ಜ್ಞಾನ ಚೇತನ ಎಜುಕೇಶನ್ ಟ್ರಸ್ಟ್" ನ ವಿಶೇಷತೆಗಳು:
ಉಡುಪಿ ಜಿಲ್ಲೆ ಮತ್ತು ಪ್ರಧಾನವಾಗಿ ಶಿರ್ವ ಗ್ರಾಮೀಣ ಪ್ರದೇಶದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪದವಿ ಪೂರ್ವ ಹಂತದಲ್ಲಿ ಶ್ರೇಷ್ಠ ಗುಣಮಟ್ಟದ ಶಿಕ್ಷಣ ನೀಡುವ ನಿಟ್ಟಿನಲ್ಲಿ ಸ್ಥಾಪನೆಗೊಂಡ ನವ ಶಿಕ್ಷಣ ಸಂಸ್ಥೆ "ಜ್ಞಾನ ಚೇತನ ಎಜುಕೇಶನ್ ಟ್ರಸ್ಟ್".
ಯಾವುದೇ ಶಿಕ್ಷಣ ಸಂಸ್ಥೆಯ ವ್ಯಕ್ತಿತ್ವವನ್ನು ಬರೀ ಇಟ್ಟಿಗೆ, ಕಟ್ಟಿಗೆ, ಕಟ್ಟಡಗಳಿಂದ ಅಳೆಯಲು ಸಾಧ್ಯವಿಲ್ಲ, ಬದಲಾಗಿ ಶಿಕ್ಷಣ ಸಂಸ್ಥೆಯ ಒಳಗಿರುವ ಶಿಕ್ಷಕರ ಮತ್ತು ವಿದ್ಯಾರ್ಥಿಗಳ ಗುಣಮಟ್ಟ, ಅನುಭವ, ಜ್ಞಾನಗಳಿಂದಲೇ ಅಳೆಯಲು ಸಾಧ್ಯ. ಹಾಗಾಗಿ ನಮ್ಮ ಶಿಕ್ಷಣ ಸಂಸ್ಥೆ ಮೊದಲ ಆದ್ಯತೆಯನ್ನು ನುರಿತ ಅನುಭವಿ ವಿಷಯ ತಜ್ಞ ಉಪನ್ಯಾಸಕರುಗಳಿಗೆ ನೀಡಿ ಜಿಲ್ಲಾ ಮಟ್ಟದಲ್ಲಿ ವಿಜ್ಞಾನ ಮತ್ತು ವಾಣಿಜ್ಯ ವಿಷಯಗಳಲ್ಲಿ ವಿಶೇಷ ಅನುಭವ ಜ್ಞಾನ ಸಂಪನ್ನರಾದ ಉಪನ್ಯಾಸಕರುಗಳನ್ನು ನಮ್ಮ ಸಂಸ್ಥೆಗೆ ಇದಾಗಲೇ ನೇಮಿಸಿಕೊಂಡು ಶುಭಾರಂಭ ಮಾಡಿದ್ದೇವೆ.
ಗ್ರಾಮೀಣ ಮಟ್ಟದ ಪ್ರತಿಭಾವಂತ ವಿದ್ಯಾರ್ಥಿಗಳ ಕಲಿಕೆಯ ಸಾಮರ್ಥ್ಯವನ್ನು ಹೆಚ್ಚಿಸುವ ದೃಷ್ಟಿಯಿಂದ ವಿಜ್ಞಾನ ಮತ್ತು ವಾಣಿಜ್ಯ ವಿಷಯಗಳಿಗೆ ವಿಶೇಷ ಆದ್ಯತೆಯನ್ನು ನೀಡಿ ಸಮರ್ಪಣಾ ಭಾವದ ವಿಷಯ ತಜ್ಞ ಉಪನ್ಯಾಸಕರ ನೇಮಕಾತಿ ಮಾಡಲಾಗಿದೆ ಎನ್ನುವುದನ್ನು ತಿಳಿಸಲು ಹೆಮ್ಮೆಪಡುತ್ತೇವೆ.
ಪಿಯುಸಿ ಅನಂತರದಲ್ಲಿ ಉನ್ನತ ಶಿಕ್ಷಣ ಮತ್ತು ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಿಗೆ ಪ್ರವೇಶಾತಿ ಪಡೆಯಲು, ರಾಜ್ಯ ರಾಷ್ಟ್ರಮಟ್ಟದಲ್ಲಿ ನಡೆಯುವ ಪ್ರವೇಶಾತಿ ಪರೀಕ್ಷೆಗಳನ್ನು ಸಮರ್ಥವಾಗಿ ಎದುರಿಸಲು ಬೇಕಾಗುವ ವಿಶೇಷ ತರಬೇತಿಯನ್ನು ನೀಡುವುದು ನಮ್ಮ "ಜ್ಞಾನ ಚೇತನ ಎಜುಕೇಶನ್ ಟ್ರಸ್ಟ್" ನ ಇನ್ನೊಂದು ಆದ್ಯತೆ. ಉದಾಹರಣೆ: NEET / JEE / KCET / CA Foundation / CSEET ಮುಂತಾದ ವಿವಿಧ ಪ್ರವೇಶಾತಿ ಪರೀಕ್ಷೆಗಳಿಗೆ ನಮ್ಮ ವಿದ್ಯಾರ್ಥಿಗಳನ್ನು ತಯಾರಿಗೊಳಿಸುವ ನಿಟ್ಟಿನಲ್ಲಿ ಕಾಲೇಜು ಒಳಗೆ ಗ್ರಾಮೀಣ ವಿದ್ಯಾರ್ಥಿಗಳ ಅನುಕೂಲಕ್ಕಾಗಿಯೇ ವಿಷಯ ತಜ್ಞ ತರಬೇತುದಾರರಿಂದ ನಿರಂತರವಾಗಿ ತರಬೇತಿಗೊಳಿಸುವ ಕಾರ್ಯಕ್ರಮಕ್ಕೆ ನಮ್ಮ ಸಂಸ್ಥೆ ಇದಾಗಲೇ ತಯಾರಿ ನಡೆಸಿದೆ.
ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳ ಬಹುಮುಖ ಪ್ರತಿಭೆಗಳನ್ನು ಗುರುತಿಸಿ ಅದಕ್ಕೆ ತರಬೇತಿ ನೀಡುವ ಯೋಜನೆಯನ್ನು ರೂಪಿಸಿಕೊಂಡಿದ್ದೇವೆ. ಬಹುವಿಸ್ತಾರವಾದ ಕ್ರೀಡಾಂಗಣ, ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪೂರಕವಾದ ವೇದಿಕೆಗಳು ಮತ್ತು ನಿರ್ದೇಶಕರುಗಳನ್ನು ತಯಾರಿಗೊಳಿಸಿದ್ದೇವೆ. ಇಂದಿನ ಸ್ಪರ್ಧಾತ್ಮಕ ಜಗತ್ತನ್ನು ನಾವು ಸಮರ್ಥವಾಗಿ ಎದುರಿಸಬೇಕಾದರೆ ಅಂಕಗಳ ಜೊತೆಗೆ ಪರಿಪೂರ್ಣ ವ್ಯಕ್ತಿತ್ವದ ಬೆಳವಣಿಗೆಯೂ ಅಗತ್ಯ ಎನ್ನುವುದು ನಾವು ಅಳವಡಿಸಿಕೊಂಡಿರುವ "ಜ್ಞಾನ ಚೇತನ ಎಜುಕೇಶನ್ ಟ್ರಸ್ಟ್" ನ ಪ್ರಮುಖವಾದ ಇನ್ನೊಂದು ಶೈಕ್ಷಣಿಕ ಯೋಜನೆ.
ಈ ಕಾಲೇಜಿನ ವಿಶೇಷ ಆಕರ್ಷಣೆಗಳು:
27 ಎಕರೆಗಳ ಬಹುವಿಸ್ತಾರವಾದ ಕ್ಯಾಂಪಸ್, ಹಸಿರು ಹಾಸಿದ ಪರಿಸರ ವಿದ್ಯಾರ್ಥಿಗಳ ಸರ್ವಾಂಗೀಣ ಬೆಳವಣಿಗೆಗೆ ಪೂರಕ, ನೈಸರ್ಗಿಕವಾದ ಪ್ರಕೃತಿಯ ತಾಣದಲ್ಲಿ ದೈಹಿಕ ವ್ಯಾಯಾಮ ಮತ್ತು ಯೋಗ.
ಎಲ್ಲಾ ವಿದ್ಯಾರ್ಥಿಗಳಿಗೂ ಅನುಕೂಲಕರವಾಗುವ ಆಧುನಿಕ ಪರಿಕರಗಳಿಂದ ರೂಪಿಸಲ್ಪಟ್ಟ ಪ್ರಯೋಗಾಲಯಗಳು.
ಅರ್ಹ ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನದ ಸೌಲಭ್ಯ.
ಪ್ರತಿಭಾವಂತ ಉತ್ತಮ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರವೇಶಾತಿಯಲ್ಲಿ ವಿಶೇಷ ಪ್ರೋತ್ಸಾಹ.
ಗ್ರಾಮೀಣ ಪ್ರದೇಶಗಳಿಂದ ಬರುವ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ಸುಗಳ ವ್ಯವಸ್ಥೆ ಕಲ್ಪಿಸಲಾಗುವುದು.